ಅಭ್ರಕಚೂರ್ಣ
	ಸಂಯುಕ್ತಜಲದಿಂದ ಕೂಡಿದ ಮೆಗ್ನೀಷಿಯಮ್ ಸಿಲಿ ಕೇಟ್ (ತಾಲಕ; ಟ್ಯಾಲ್ಕ್).   ಇದರ ರಾಸಾಯನಿಕ ಸೂತ್ರ. ಇದರಲ್ಲಿ ಸ್ವಲ್ಪಮಟ್ಟಿಗೆ ಕ್ಯಾಲ್ಸಿಯಂ ಆಕ್ಸೈಡ್  ಅಲ್ಯೂಮಿನಿಯಂ ಆಕ್ಸೈಡ್   ಮತ್ತು ಇತರ ಆಕ್ಸೈಡುಗಳೂ ಇರುತ್ತವೆ. ಬಹುಶಃ ಇವು ಕಶ್ಮಲಗಳು. ರಚನೆಯಲ್ಲಿ ಅಭ್ರಕ (ಮೈಕ) ಜಾತಿಗೆ ಸಂಬಂಧಿಸಿದೆ. ಮೆಗ್ನೀಷಿಯಂ ಸಿಲಿಕೇಟ್ ಪದರಗಳಿಂದ ಕೂಡಿರುವ ಖನಿಜ; ಬಹಳ ಮೃದು. ಮುಖಕ್ಕೆ ಸೌಂದರ್ಯವರ್ಧಕವಾಗಿ ಉಪಯೋಗಿಸುವ ಅಂಗರಾಗಗಳಿಗೆ ಆಧಾರ. ಪಿಂಗಾಣಿ ವಸ್ತುಗಳು, ಬಣ್ಣಗಳು, ಕ್ರಿಮಿನಾಶಕಗಳು, ಸಾಮಾನು ತಯಾರಿಕೆಗಳಲ್ಲೂ ಪ್ರಯೋಗಶಾಲೆಯಲ್ಲೂ ಇದರ ಬಳಕೆ ಇದೆ. 	(ನೋಡಿ- ಅಂಗರಾಗಗಳು,-ಅಂಗರಾಗಶಾಸ್ತ್ರ)							
(ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ